Psalms 115

ಯೆಹೋವನೊಬ್ಬನೇ ರಕ್ಷಕನು

ದಾವೀದನ ಕೀರ್ತನೆ.

1ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿ, ಸತ್ಯೆತೆಗಳ ನಿಮಿತ್ತವಾಗಿ
ನಿನ್ನ ಹೆಸರನ್ನೇ ಘನಪಡಿಸು.
2 <<ಅವರ ದೇವರು ಎಲ್ಲಿದ್ದಾನೆ?>> ಎಂದು ಅನ್ಯರು ಏಕೆ ಹೇಳಬೇಕು?

3

ನಮ್ಮ ದೇವರು ಪರಲೋಕದಲ್ಲಿದ್ದಾನೆ;

ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ.
4 ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ;
ಅವು ಮನುಷ್ಯರ ಕೈಕೆಲಸವಷ್ಟೇ.

5

ಅವು ಬಾಯಿದ್ದರೂ ಮಾತನಾಡುವುದಿಲ್ಲ;

ಕಣ್ಣಿದ್ದರೂ ನೋಡುವುದಿಲ್ಲ.
6 ಕಿವಿಯಿದ್ದರೂ ಕೇಳುವುದಿಲ್ಲ;
ಮೂಗಿದ್ದರೂ ಮೂಸುವುದಿಲ್ಲ.

7

ಕೈಯುಂಟು ಮುಟ್ಟುವುದಿಲ್ಲ;

ಕಾಲುಂಟು ನಡೆಯುವುದಿಲ್ಲ;
ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ.
8 ಅವುಗಳನ್ನು ಮಾಡುವವರೂ,
ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.

9

ಇಸ್ರಾಯೇಲರೇ, ಯೆಹೋವನಲ್ಲಿ ಭರವಸವಿಡಿರಿ.

ಅವರ ಸಹಾಯಕನು, ಗುರಾಣಿಯು ಆತನೇ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
ಅವರ ಸಹಾಯಕನು, ಗುರಾಣಿಯು ಆತನೇ.
11 ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ.
ಅವರ ಸಹಾಯಕನು, ಗುರಾಣಿಯು ಆತನೇ.

12

ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ;

ಸಣ್ಣವರು ಮೊದಲುಗೊಂಡು ದೊಡ್ಡವರ ವರೆಗೆ ಎಲ್ಲರನ್ನೂ ಆಶೀರ್ವದಿಸುವನು.
13 ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು;
ಆರೋನನ ಮನೆತನದವರನ್ನು ಆಶೀರ್ವದಿಸುವನು.
ತನ್ನ ಭಕ್ತರನ್ನು ಆಶೀರ್ವದಿಸುವನು.
14 ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ;

15

ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.

ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ.
16 ಪರಲೋಕವು ಯೆಹೋವನದು;
ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ.

17

ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ;

ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ.
18 ನಾವೋ ಇಂದಿನಿಂದ ಸದಾಕಾಲವೂ
ಯೆಹೋವನನ್ನು ಕೊಂಡಾಡುವೆವು.
ಯೆಹೋವನಿಗೆ ಸ್ತೋತ್ರ!

Copyright information for KanULB